ಜುಲೈ 8,9,10 ರ ಮೂರು ದಿನಗಳ ಹೋರಾಟದಲ್ಲಿ ಸಚಿವ ಪರಮೇಶ್ವರ್ ನಾಯಕ್, ರವರು ನೀಡಿದ್ದ ಆಶ್ವಾಸನೆ ಇನ್ನೂ ಆಶ್ವಾಸನೆಯ ಹಂತದಲ್ಲೇ ಇದೆ. ಹೊಸ ಟೆಂಡರ್ ಗೆ ಮುಂದಾಗದ ಸರ್ಕಾರ ಕಾರ್ಮಿಕರನ್ನು 3 ದಶಕಗಳಿಂದ ಇಎಸ್ಐ, ಪಿಎಫ್, ಮೂಲಭೂತ ಸೌಕರ್ಯಗಳನ್ನು ನೀಡದೇ, ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡದೇ ಗುತ್ತಿಗೆದಾರರ ಪರ ವಹಿಸುತ್ತಿದೆ. ಇಂದು ಮಂಡ್ಯದ ಪುಸ್ತಕಮನೆ ಯಲ್ಲಿ ರಾಜ್ಯ ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ರಾಜ್ಯ ಮಟ್ಟದ ಸಭೆ ಆಯೋಜಿಸಲಾಗಿತ್ತು, ಗುಲ್ಬರ್ಗ, ಯಾದಗಿರಿ, ಧಾರವಾಡ, ಗದಗ, ಜಗಳೂರು, ಹಾಸನ, ಮಂಡ್ಯ, ಮೈಸೂರು, ರಾಮನಗರ, ಮದ್ದೂರು, ಚಾಮರಾಜನಗರ, ಜಿಲ್ಲೆಗಳಿಂದ ಅನ್ನಭಾಗ್ಯ ಹಮಾಲಿ ಕಾರ್ಮಿಕರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಪೂರ್ವಯೋಜನೆಯನ್ನು ಮಾಡಿಕೊಂಡರು. ಜಿಲ್ಲಾವಾರು ಪ್ರತಿಭಟನೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ
- ಕರ್ನಾಟಕ ಶ್ರಮಿಕ ಶಕ್ತಿ



No comments:
Post a Comment