ಕಾರ್ಮಿಕರ ಪರಿಸ್ಥಿತಿ, ಸರ್ಕಾರಗಳ ನೀತಿ ಕುರಿತು ಚರ್ಚೆ ಮತ್ತು ಮುಂದಿನ ಹೋರಾಟದ ಕುರಿತು ಯೋಜನೆ ರೂಪಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ನೂರಾರು ಕಾರ್ಮಿಕರು ತಮ್ಮ ಬದುಕಿನ ಭದ್ರತೆ, ಇಎಸ್ ಐ, ಪಿಎಫ್ ಸೌಲಭ್ಯ, ಮಹಾರಾಷ್ಟ್ರ ಮಾದರಿಯ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿಯಾಗುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋದಿ ನೀತಿಗಳು ಕಾರ್ಮಿಕರ ಬದುಕನ್ನು ಅತಂತ್ರಗೊಳಿಸುತ್ತಿರುವ ಆತಂಕದೊಂದಿಗೆ ಕಾರ್ಮಿಕರ ಪರವಾದ ಭದ್ರವಾದ ಕಾನೂನುಗಳು ಜಾರಿಯಾಗಲು ನಡೆಸಬೇಕಾದ ಹೋರಾಟದ ಕುರಿತು ಚರ್ಚೆ ನಡೆಯಿತು.
ದಾವಣಗೆರೆ ಜಿಲ್ಲೆಯ ಸಿಮೆಂಟ್, ಜೋಳ, ಹತ್ತಿ, ಹೊಗೆಸೊಪ್ಪು, ಗೊಬ್ಬರದ ಗೋದಾಮುಗಳು, ರೈಲ್ವೇ ಗೂಡ್ಸ್ ಶೆಡ್, ಎಪಿಎಂಸಿ, ವರ್ತಕರ ಹತ್ತಿರ ಕೆಲಸ ಮಾಡುವವರು, ಬಸ್ ಸ್ಟ್ಯಾಂಡ್ ನಲ್ಲಿ ಕೆಲಸ ಮಾಡುವ ಹಮಾಲಿಗಳನ್ನೂ ಸಹ ಸಂಘಟಿಸಿ ಬಲಿಷ್ಟ ಕಾರ್ಮಿಕ ಚಳವಳಿ ನಿರ್ಮಿಸುವ ರಾಜ್ಯ ಸಮಿತಿ ಪ್ರಸ್ತಾಪವನ್ನು ಸಮಾವೇಶವು ಒಕ್ಕೊರಲಿನಿಂದ ಬೆಂಬಲಿಸಿತು.
ಸಮಾವೇಶದ ಉದ್ಘಾಟನೆಯನ್ನು ಕರ್ನಾಟಕ ಜನಶಕ್ತಿಯ ಪ್ರಧಾನ ಸಂಚಾಲಕರಾದ ಡಾ.ವಾಸು ಹೆಚ್.ವಿ ರವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕ ಒಕ್ಕೂಟದ ರಾಜ್ಯಾಧ್ಯಕ್ಷರಾದ ವರದರಾಜೇಂದ್ರ, ಜಿಲ್ಲಾದ್ಯಕ್ಷರಾದ ನಿಂಗರಾಜ್, ಜಿಲ್ಲಾ ಉಪಾಧ್ಯಕ್ಷರಾದ ಮುಜೀಬ್ , ಜಿಲ್ಲಾ ಸಂಚಾಲಕರಾದ ಸತೀಶ್ ಅರವಿಂದ್ ರವರು ಮತ್ತು ವಿಶೇಷ ಆಹ್ವಾನಿತರಾಗಿ ವಕೀಲರಾದ ಅನೀಪಾಷರವರು ಉಪಸ್ಥಿತರಿದ್ದರು.

.jpg)
.jpg)
No comments:
Post a Comment