Tuesday, July 28, 2015

ಕಾರ್ಮಿಕನೊಬ್ಬನ ರಾಜಕೀಯ ತಿಳುವಳಿಕೆ ಹೆಚ್ಚಾಗುವುದು ಹೇಗೆ? ವೀಕ್ಷಿಸಿ ಮತ್ತು ವಿಶ್ಲೇಷಿಸಿ.....



ಸಂಘಟನೆಯಲ್ಲಿ ನಿರಂತರ  ತೊಡಗಿಸಿಕೊಳ್ಳುವ ಮೂಲಕ ಅಸಂಘಟಿತ ಕ್ಷೇತ್ರದ  ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕರ ರಾಜಕೀಯ ತಿಳುವಳಿಕೆ ನೋಡಲು ಈ ವಿಡಿಯೋ ನೀವು ನೋಡಲೇ ಬೇಕು.

ಜುಲೈ 23,2015 ರಂದು ದಾವಣಗೆರೆ ಜಿಲ್ಲೆಯ ಲೋಡಿಂಗ್ ಕಾರ್ಮಿಕರು ಇಎಸ್ಐ & ಪಿಎಫ್ ಜಾರಿಗಾಗಿ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ.







ಜುಲೈ 23, 2015 ರಂದು ದಾವಣಗೆರೆ ಜಿಲ್ಲೆಯ ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕರು  ಇ ಎಸ್ ಐ ಮತ್ತು ಪಿಎಫ್ ಜಾರಿಗೆ ಒತ್ತಾಯಿಸಿ ದಾವಣಗೆರೆ ಬಸ್ ನಿಲ್ದಾಣದಿಂದ 3 ಕಿ.ಮೀ ಗಳ ಮೆರವಣಿಗೆಯ ಮೂಲಕ  ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿರುವುದು.
ಪ್ರಗತಿಪರ ವಕೀಲರಾದ ಅನೀಸ್ ಪಾಷರವರು, ರಾಜ್ಯಾಧ್ಯಕ್ಷರಾದ ವರದರಾಜೇಂದ್ರ,  ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕ ಸಂಘಟನೆಯ ಮೈಸೂರು ಜಿಲ್ಲೆಯ ಅಧ್ಯಕ್ಷರಾದ ಕರಿಯಪ್ಪ ರವರು  ಸರ್ಕಾರದ ಆದೇಶ ಬಂದು ವರ್ಷವಾದರೂ ಇಎಸ್ಐ & ಪಿಎಫ್ ಜಾರಿ ಮಾಡದ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಲು ಹಕ್ಕೊತ್ತಾಯಗಳನ್ನು  ಸಲ್ಲಿಸುತ್ತಿರುವುದು. 

ಪೌರಕಾರ್ಮಿಕರ ಸ್ಥಿತಿ ಗತಿ


ಪೌರಕಾರ್ಮಿಕರಿಗೆ ಬೆಂಗಳೂರಿನ ಬಿ.ಬಿ.ಎಂ.ಪಿ. ವಾರ್ಡ್ ಒಂದರಲ್ಲಿ ಗುತ್ತಿಗೆದಾರ ನೀಡಿರುವ ಗುರುತಿನ ಪತ್ರ, ಈ ಗುರುತಿನ ಚೀಟಿಯಲ್ಲಿ ಗುತ್ತಿಗೆದಾರನ  ಫೋನ್ ನಂ  ಇಲ್ಲ, ಕಾರ್ಮಿಕರ ಸಂಖ್ಯೆ ಇಲ್ಲ,  ಬಿ.ಬಿ.ಎಂ.ಪಿ. ಆಯುಕ್ತರು 'ಕಾಫಿ ವಿತ್ ಪೌರಕಾರ್ಮಿಕ' ಅಂತ ಮಾಡ್ತಿದ್ದಾರೆ ಆದರೂ ಈ ರೀತಿಯ ಲೋಪದೋಷಗಳು ಅವರ ಕಣ್ಣಿಗೆ ಕಾಣುತ್ತಲೇ ಇಲ್ಲ. 

ಇಎಸ್ ಐ ಮತ್ತು ಪಿಎಫ್ ಜಾರಿಗಾಗಿ ಮೈಸೂರು ಜಿಲ್ಲೆಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ ಜೂನ್ 19, 2015.





ಮೈಸೂರು ಜಿಲ್ಲೆಯ ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕರ ಸಮಾವೇಶ ಮತ್ತು  ಇಎಸ್ ಐ & ಪಿಎಫ್ ಜಾರಿಗಾಗಿ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಜೂನ್ 19, 2015. 

ಲೋಡಿಂಗ್ ಅನ್ ಲೋಡಿಂಗ್ ಕಾರ್ಮಿಕರ ರಾಜ್ಯ ಸಮಿತಿ ಸಭೆ : ಜುಲೈ 12, 2015







ಜುಲೈ 12, 2015 ರಂದು ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ರಾಜ್ಯ ಸಮಿತಿ ಸಭೆಯಲ್ಲಿ  ಪದಾಧಿಕಾರಿಗಳ ಮಾತು. ಕಾರ್ಮಿಕರ ಹೋರಾಟದಿಂದ ಜಾರಿಯಾದ ಇಎಸ್ ಐ, ಪಿಎಫ್ ನ ರಾಜ್ಯಾದ್ಯಂತ  ಜಾರಿಯಾಗಿರುವ  ಕುರಿತು  ಸಮೀಕ್ಷೆ ಮತ್ತು  ಪುನರ್ ವಿಶ್ಲೇಷಣೆಯಲ್ಲಿ ತೊಡಗಿರುವ ರಾಜ್ಯಸಮಿತಿ ಸದಸ್ಯರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಶ್ರಮಿಕರ ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಿದ ಬಹುಮಾನ - ಕರ್ನಾಟಕ ಶ್ರಮಿಕ ಶಕ್ತಿ




want to win medal wait for next session on 2016..............

Monday, June 1, 2015

ಶ್ರಮಿಕರ ಕ್ರೀಡಾಕೂಟ ಮೇ 31, 2015 / Sports for workers on May 31, 2015

ಮೇ ದಿನಾಚರಣೆ ಅಂಗವಾಗಿ ಕರ್ನಾಟಕ ಶ್ರಮಿಕ ಶಕ್ತಿಯು ಶ್ರಮಿಕರ ಕ್ರೀಡಾಕೂಟವನ್ನು ಮೇ 31 ನೇ ತಾರೀಕು ಆಯೋಜಿಸಿತ್ತು. ಈ ಕ್ರೀಡಾ ಕೂಟದ ಕೆಲವು ಛಾಯಚಿತ್ರಗಳು ಈ ಕೆಳಗಿನಂತಿವೆ.

                                                                   ಕರಪತ್ರದ ಮುಖಪುಟ.





                                               

                                                      ಶ್ರಮಿಕರ ಕ್ರೀಡಾ ಕೂಟದ ಆಹ್ವಾನ ಪತ್ರಿಕೆ.



                                                       ಕಾರ್ಯಕ್ರಮದ ಪ್ರಚಾರಕ್ಕಾಗಿ  

                                                                 

ಸಮಾರೋಪ ಸಮಾರಂಭದ ಅಂದವಾದ ಬ್ಯಾನರ್

1. ಗುಂಡು ಎಸೆತ ಕ್ರೀಡೆಯ ಕೆಲವು ದೃಶ್ಯಗಳು.





2. 50 ಕೆಜಿ ಭಾರದ ಮೂಟೆ ಹೊತ್ತು 100 ಮೀಟರ್ ಓಟದ ಸ್ಪರ್ಧೆಯ ದೃಶ್ಯ








3. ಮಹಿಳಾ ವಿಭಾಗದ ಕಬ್ಬಡಿ ಪಂದ್ಯಾವಳಿ


4. 100 ಕೆಜಿ ಭಾರದ ಮೂಟೆಯನ್ನು ನೇರವಾಗಿ ಎತ್ತುವ ಸ್ಪರ್ಧೆ 




5. ಶ್ರಮಿಕರ ಕ್ರೀಡಾಕೂಟದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಪ್ರಕಟಿತ ಪುಸ್ತಕ ಪ್ರದರ್ಶನ, ಮಾರಾಟ ಮಳಿಗೆ ಮತ್ತು ಕರ್ನಾಟಕ ಶ್ರಮಿಕಶಕ್ತಿ ನಡೆದು ಬಂದ ಹಾದಿಯ ಹೊರಳು ನೋಟಗಳ ಪ್ರದರ್ಶನ.





6. ಸುಧೀರ್ಘ ಹೋರಾಟದ ನಂತರ ಅಸಂಘಟಿತ ಕ್ಷೇತ್ರದ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರು ಇಎಸ್ ಐ ಸೌಲಭ್ಯ ಜಾರಿಗೊಳಿಸಿಕೊಂಡಿರುವ  ಕಾರ್ಮಿಕರಿಗೆ ಅನುಕೂಲವಾಗಲೆಂದು ಪ್ರಥಮ ಬಾರಿಗೆ "ಕಾರ್ಮಿಕರ ಅನುಕೂಲಕ್ಕಾಗಿ ಇಎಸ್ ಐ ಕೈಪಿಡಿ" ಪುಸ್ತಕವನ್ನು ಪ್ರಕಟಿಸಿದ ಕರ್ನಾಟಕ ಶ್ರಮಿಕಶಕ್ತಿ.




Thursday, April 2, 2015

Karnataka state Loading & Unloading workers Davanagere District Confference April 2, 2015.

ಕಾರ್ಮಿಕರ ಪರಿಸ್ಥಿತಿ, ಸರ್ಕಾರಗಳ ನೀತಿ ಕುರಿತು ಚರ್ಚೆ ಮತ್ತು ಮುಂದಿನ ಹೋರಾಟದ ಕುರಿತು ಯೋಜನೆ ರೂಪಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ನೂರಾರು ಕಾರ್ಮಿಕರು ತಮ್ಮ ಬದುಕಿನ ಭದ್ರತೆ, ಇಎಸ್ ಐ, ಪಿಎಫ್ ಸೌಲಭ್ಯ, ಮಹಾರಾಷ್ಟ್ರ ಮಾದರಿಯ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿಯಾಗುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋದಿ ನೀತಿಗಳು ಕಾರ್ಮಿಕರ ಬದುಕನ್ನು ಅತಂತ್ರಗೊಳಿಸುತ್ತಿರುವ ಆತಂಕದೊಂದಿಗೆ ಕಾರ್ಮಿಕರ ಪರವಾದ ಭದ್ರವಾದ ಕಾನೂನುಗಳು ಜಾರಿಯಾಗಲು ನಡೆಸಬೇಕಾದ ಹೋರಾಟದ ಕುರಿತು ಚರ್ಚೆ ನಡೆಯಿತು.
ದಾವಣಗೆರೆ ಜಿಲ್ಲೆಯ ಸಿಮೆಂಟ್, ಜೋಳ, ಹತ್ತಿ, ಹೊಗೆಸೊಪ್ಪು, ಗೊಬ್ಬರದ ಗೋದಾಮುಗಳು, ರೈಲ್ವೇ ಗೂಡ್ಸ್ ಶೆಡ್, ಎಪಿಎಂಸಿ, ವರ್ತಕರ ಹತ್ತಿರ ಕೆಲಸ ಮಾಡುವವರು, ಬಸ್ ಸ್ಟ್ಯಾಂಡ್ ನಲ್ಲಿ ಕೆಲಸ ಮಾಡುವ ಹಮಾಲಿಗಳನ್ನೂ ಸಹ ಸಂಘಟಿಸಿ ಬಲಿಷ್ಟ ಕಾರ್ಮಿಕ ಚಳವಳಿ ನಿರ್ಮಿಸುವ ರಾಜ್ಯ ಸಮಿತಿ ಪ್ರಸ್ತಾಪವನ್ನು ಸಮಾವೇಶವು ಒಕ್ಕೊರಲಿನಿಂದ ಬೆಂಬಲಿಸಿತು.
ಸಮಾವೇಶದ ಉದ್ಘಾಟನೆಯನ್ನು ಕರ್ನಾಟಕ ಜನಶಕ್ತಿಯ ಪ್ರಧಾನ ಸಂಚಾಲಕರಾದ ಡಾ.ವಾಸು ಹೆಚ್.ವಿ ರವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕ ಒಕ್ಕೂಟದ ರಾಜ್ಯಾಧ್ಯಕ್ಷರಾದ ವರದರಾಜೇಂದ್ರ, ಜಿಲ್ಲಾದ್ಯಕ್ಷರಾದ ನಿಂಗರಾಜ್, ಜಿಲ್ಲಾ ಉಪಾಧ್ಯಕ್ಷರಾದ ಮುಜೀಬ್ , ಜಿಲ್ಲಾ ಸಂಚಾಲಕರಾದ ಸತೀಶ್ ಅರವಿಂದ್ ರವರು ಮತ್ತು ವಿಶೇಷ ಆಹ್ವಾನಿತರಾಗಿ ವಕೀಲರಾದ ಅನೀಪಾಷರವರು ಉಪಸ್ಥಿತರಿದ್ದರು.