Tuesday, July 28, 2015

ಕಾರ್ಮಿಕನೊಬ್ಬನ ರಾಜಕೀಯ ತಿಳುವಳಿಕೆ ಹೆಚ್ಚಾಗುವುದು ಹೇಗೆ? ವೀಕ್ಷಿಸಿ ಮತ್ತು ವಿಶ್ಲೇಷಿಸಿ.....



ಸಂಘಟನೆಯಲ್ಲಿ ನಿರಂತರ  ತೊಡಗಿಸಿಕೊಳ್ಳುವ ಮೂಲಕ ಅಸಂಘಟಿತ ಕ್ಷೇತ್ರದ  ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕರ ರಾಜಕೀಯ ತಿಳುವಳಿಕೆ ನೋಡಲು ಈ ವಿಡಿಯೋ ನೀವು ನೋಡಲೇ ಬೇಕು.

ಜುಲೈ 23,2015 ರಂದು ದಾವಣಗೆರೆ ಜಿಲ್ಲೆಯ ಲೋಡಿಂಗ್ ಕಾರ್ಮಿಕರು ಇಎಸ್ಐ & ಪಿಎಫ್ ಜಾರಿಗಾಗಿ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ.







ಜುಲೈ 23, 2015 ರಂದು ದಾವಣಗೆರೆ ಜಿಲ್ಲೆಯ ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕರು  ಇ ಎಸ್ ಐ ಮತ್ತು ಪಿಎಫ್ ಜಾರಿಗೆ ಒತ್ತಾಯಿಸಿ ದಾವಣಗೆರೆ ಬಸ್ ನಿಲ್ದಾಣದಿಂದ 3 ಕಿ.ಮೀ ಗಳ ಮೆರವಣಿಗೆಯ ಮೂಲಕ  ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿರುವುದು.
ಪ್ರಗತಿಪರ ವಕೀಲರಾದ ಅನೀಸ್ ಪಾಷರವರು, ರಾಜ್ಯಾಧ್ಯಕ್ಷರಾದ ವರದರಾಜೇಂದ್ರ,  ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕ ಸಂಘಟನೆಯ ಮೈಸೂರು ಜಿಲ್ಲೆಯ ಅಧ್ಯಕ್ಷರಾದ ಕರಿಯಪ್ಪ ರವರು  ಸರ್ಕಾರದ ಆದೇಶ ಬಂದು ವರ್ಷವಾದರೂ ಇಎಸ್ಐ & ಪಿಎಫ್ ಜಾರಿ ಮಾಡದ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಲು ಹಕ್ಕೊತ್ತಾಯಗಳನ್ನು  ಸಲ್ಲಿಸುತ್ತಿರುವುದು. 

ಪೌರಕಾರ್ಮಿಕರ ಸ್ಥಿತಿ ಗತಿ


ಪೌರಕಾರ್ಮಿಕರಿಗೆ ಬೆಂಗಳೂರಿನ ಬಿ.ಬಿ.ಎಂ.ಪಿ. ವಾರ್ಡ್ ಒಂದರಲ್ಲಿ ಗುತ್ತಿಗೆದಾರ ನೀಡಿರುವ ಗುರುತಿನ ಪತ್ರ, ಈ ಗುರುತಿನ ಚೀಟಿಯಲ್ಲಿ ಗುತ್ತಿಗೆದಾರನ  ಫೋನ್ ನಂ  ಇಲ್ಲ, ಕಾರ್ಮಿಕರ ಸಂಖ್ಯೆ ಇಲ್ಲ,  ಬಿ.ಬಿ.ಎಂ.ಪಿ. ಆಯುಕ್ತರು 'ಕಾಫಿ ವಿತ್ ಪೌರಕಾರ್ಮಿಕ' ಅಂತ ಮಾಡ್ತಿದ್ದಾರೆ ಆದರೂ ಈ ರೀತಿಯ ಲೋಪದೋಷಗಳು ಅವರ ಕಣ್ಣಿಗೆ ಕಾಣುತ್ತಲೇ ಇಲ್ಲ. 

ಇಎಸ್ ಐ ಮತ್ತು ಪಿಎಫ್ ಜಾರಿಗಾಗಿ ಮೈಸೂರು ಜಿಲ್ಲೆಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ ಜೂನ್ 19, 2015.





ಮೈಸೂರು ಜಿಲ್ಲೆಯ ಲೋಡಿಂಗ್ & ಅನ್ ಲೋಡಿಂಗ್ ಕಾರ್ಮಿಕರ ಸಮಾವೇಶ ಮತ್ತು  ಇಎಸ್ ಐ & ಪಿಎಫ್ ಜಾರಿಗಾಗಿ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಜೂನ್ 19, 2015. 

ಲೋಡಿಂಗ್ ಅನ್ ಲೋಡಿಂಗ್ ಕಾರ್ಮಿಕರ ರಾಜ್ಯ ಸಮಿತಿ ಸಭೆ : ಜುಲೈ 12, 2015







ಜುಲೈ 12, 2015 ರಂದು ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ರಾಜ್ಯ ಸಮಿತಿ ಸಭೆಯಲ್ಲಿ  ಪದಾಧಿಕಾರಿಗಳ ಮಾತು. ಕಾರ್ಮಿಕರ ಹೋರಾಟದಿಂದ ಜಾರಿಯಾದ ಇಎಸ್ ಐ, ಪಿಎಫ್ ನ ರಾಜ್ಯಾದ್ಯಂತ  ಜಾರಿಯಾಗಿರುವ  ಕುರಿತು  ಸಮೀಕ್ಷೆ ಮತ್ತು  ಪುನರ್ ವಿಶ್ಲೇಷಣೆಯಲ್ಲಿ ತೊಡಗಿರುವ ರಾಜ್ಯಸಮಿತಿ ಸದಸ್ಯರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಶ್ರಮಿಕರ ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಿದ ಬಹುಮಾನ - ಕರ್ನಾಟಕ ಶ್ರಮಿಕ ಶಕ್ತಿ




want to win medal wait for next session on 2016..............